ज्ञेया अवयवेनैते यावद्यावददर्शनाः ।
अणूनामथ मूर्तत्वादेवं चेत् किं न दर्शनम् ॥८४॥
jñeyā avayavenaite yāvadyāvadadarśanāḥ |
aṇūnāmatha mūrtatvādevaṃ cet kiṃ na darśanam
ಇವು ಯಾವ ಯಾವ ಮಟ್ಟಿಗೆ ಅದೃಶ್ಯವೋ ಆ ಮಟ್ಟಿಗೆ ಅವಯವದಿಂದ (ಭಾಗಗಳಿಂದ ಯುಕ್ತವೆಂದು) ತಿಳಿಯಬೇಕು; ಪರಮಾಣುಗಳ ಮೂರ್ತತ್ವದಿಂದ ಹೀಗಾದರೆ ಅವುಗಳ ದರ್ಶನ ಏಕಿಲ್ಲ?