बुद्धिं विना कथं बोधः सा बुद्धिः प्रकृतेः प्रजा ।
न च तस्य तया योग इति चेदपरस्थितौ ॥२६॥
buddhiṃ vinā kathaṃ bodhaḥ sā buddhiḥ prakṛteḥ prajā |
na ca tasya tayā yoga iti cedaparasthitau
— ಬುದ್ಧಿಯಿಲ್ಲದೆ; — ಹೇಗೆ; — ಬೋಧ, ಅರಿವು; — ಆ; — ಬುದ್ಧಿ; — ಪ್ರಕೃತಿಯ (ಮೂಲಪ್ರಕೃತಿಯ); — ಸಂತಾನ, ಸಂತತಿ; — ಆದರೆ ಇಲ್ಲ; — ಅವನಿಗೆ (ಶಿವನಿಗೆ); — ಅದರೊಂದಿಗೆ; — ಯೋಗ, ಸಂಬಂಧ; — ಎಂದು (ಆಕ್ಷೇಪಿಸಿದರೆ); — ಅವನ ಅಪರ ಸ್ಥಿತಿಯಲ್ಲಿ
"ಬುದ್ಧಿಯಿಲ್ಲದೆ ಬೋಧ ಹೇಗೆ? ಆ ಬುದ್ಧಿಯು ಪ್ರಕೃತಿಯ ಸಂತಾನ; ಮತ್ತು ಅವನಿಗೆ (ಶಿವನಿಗೆ) ಅದರೊಂದಿಗೆ ಯೋಗವಿಲ್ಲ" ಎಂದು (ಆಕ್ಷೇಪಿಸಿದರೆ) — (ಅದು) ಅವನ ಅಪರ ಸ್ಥಿತಿಯಲ್ಲಿ (ಮಾತ್ರ).