— ಮಾಯಾಶಕ್ತಿಯಿಂದ; — ವಿಭುವಿನ (ಸರ್ವವ್ಯಾಪಿ ಮಹೇಶ್ವರನ); — ಅದೇ (ಆ ವಿಮರ್ಶವೇ); — ಭಿನ್ನ ಸಂವೇದ್ಯಗಳನ್ನು ವಿಷಯವಾಗಿ ಹೊಂದಿ (ಬೇರೆಬೇರೆ ಜ್ಞೇಯಗಳ ಗೋಚರವುಳ್ಳದ್ದಾಗಿ); — ಜ್ಞಾನ-ಸಂಕಲ್ಪ-ಅಧ್ಯವಸಾಯ ಮೊದಲಾದ ಹೆಸರುಗಳಿಂದ; — ಕಥಿಸಲ್ಪಡುತ್ತದೆ, ಹೇಳಲ್ಪಡುತ್ತದೆ
ವಿಭುವಿನ (ಮಹೇಶ್ವರನ) ಆ ವಿಮರ್ಶವೇ ಮಾಯಾಶಕ್ತಿಯ ಮೂಲಕ ಭಿನ್ನ ಸಂವೇದ್ಯಗಳನ್ನು ವಿಷಯವಾಗಿ ಹೊಂದಿ, ಜ್ಞಾನ-ಸಂಕಲ್ಪ-ಅಧ್ಯವಸಾಯ ಮೊದಲಾದ ಹೆಸರುಗಳಿಂದ ಕಥಿಸಲ್ಪಡುತ್ತದೆ.