न च युक्तं स्मृतेर् भेदे स्मर्यमाणस्य भासनम्
तेनैक्यं भिन्नकालानां संविदां वेदितैष सः ॥३॥
na ca yuktaṃ smṛter bhede smaryamāṇasya bhāsanam
tenaikyaṃ bhinnakālānāṃ saṃvidāṃ veditaiṣa saḥ
— ಅಲ್ಲ, ಇಲ್ಲ; — ಮತ್ತು; — ಯುಕ್ತ, ಸರಿ, ಸಂಭವ; — ಸ್ಮೃತಿಯ (ಸ್ಮರಿಸುವವನ); — ಭಿನ್ನನಾದರೆ (ಪೂರ್ವಾನುಭವದಿಂದ ಬೇರೆಯಾದರೆ); — ಸ್ಮರ್ಯಮಾಣ ವಸ್ತುವಿನ (ನೆನೆಯಲ್ಪಡುವುದರ); — ಭಾಸನ, ಪ್ರಕಾಶನ; — ಆದ್ದರಿಂದ; — ಐಕ್ಯ, ಏಕತೆ; — ಭಿನ್ನಕಾಲದ (ಬೇರೆ ಬೇರೆ ಕಾಲಗಳ ಜ್ಞಾನಗಳ); — ಸಂವಿತ್ತುಗಳ (ಅರಿವುಗಳ); — ವೇದಿತೃ, ಅರಿಯುವವನು; — ಈ ಒಬ್ಬನೇ ಅವನು
ಮತ್ತು ಸ್ಮರಿಸುವವನು (ಪೂರ್ವಾನುಭವದಿಂದ) ಭಿನ್ನನಾಗಿದ್ದರೆ ಸ್ಮರ್ಯಮಾಣವಸ್ತುವಿನ ಭಾಸನವು (ಪ್ರಕಾಶನವು) ಯುಕ್ತವಲ್ಲ. ಆದ್ದರಿಂದ ಭಿನ್ನಕಾಲದ ಸಂವಿತ್ತುಗಳ ಐಕ್ಯವಿದೆ; ಅವುಗಳ ವೇದಿತೃವಾದ ಈ ಒಬ್ಬನೇ ಅವನು (ಮಹೇಶ್ವರ).