सर्वत्र सर्वदा निरुपायपरमेश्वराभिमानलाभाय परमेश्वरसमताभिमानेन देहस्यापि घटादेर् अपि अवलोकनं व्रतम्
Transliteration (IAST)
sarvatra sarvadā nirupāyaparameśvarābhimānalābhāya parameśvarasamatābhimānena dehasyāpi ghaṭāder api avalokanaṃ vratam
ಸರ್ವತ್ರ ಸರ್ವದಾ ನಿರುಪಾಯವಾದ (ಉಪಾಯರಹಿತ) ಪರಮೇಶ್ವರಭಾವದ ಅಭಿಮಾನವನ್ನು ಪಡೆಯುವುದಕ್ಕಾಗಿ, ಪರಮೇಶ್ವರನೊಂದಿಗಿನ ಸಮತೆಯ ಅಭಿಮಾನದಿಂದ ದೇಹವನ್ನೂ, ಗಡಿಗೆ ಮೊದಲಾದುದನ್ನೂ ಸಹ ಅವಲೋಕಿಸುವುದೇ ವ್ರತ.