Bhagavad Gītā (Kashmirian recension)8.18
अव्यक्ताद्व्यक्तयः सर्वाः प्रभवन्त्यहरागमे ।
रात्र्यागमे प्रलीयन्ते तत्रैवाव्यक्तसंज्ञके ॥
८-१८ ॥
avyaktādvyaktayaḥ sarvāḥ prabhavantyaharāgame |
rātryāgame pralīyante tatraivāvyaktasaṃjñake ||
8-18 ||
— ಅವ್ಯಕ್ತದಿಂದ ಸಮಸ್ತ ವ್ಯಕ್ತಿಗಳು ; — ಹಗಲಿನ ಆಗಮನದಲ್ಲಿ ಉದ್ಭವಿಸುತ್ತವೆ ; — ರಾತ್ರಿಯ ಆಗಮನದಲ್ಲಿ ಲಯಗೊಳ್ಳುತ್ತವೆ ; — ಆ ಅವ್ಯಕ್ತವೆಂದು ಹೆಸರಿಸಲ್ಪಟ್ಟದ್ದರಲ್ಲಿಯೇ ಹಗಲಿನ ಆಗಮನದಲ್ಲಿ ಅವ್ಯಕ್ತದಿಂದ ಸಮಸ್ತ ವ್ಯಕ್ತಗಳು ಹುಟ್ಟುತ್ತವೆ; ರಾತ್ರಿಯ ಆಗಮನದಲ್ಲಿ ಅವ್ಯಕ್ತವೆಂಬ ಹೆಸರಿನ ಆ ಅದರಲ್ಲಿಯೇ ಲೀನವಾಗುತ್ತವೆ.