— ಇಂದ್ರಿಯಗಳುಳ್ಳವರ (ಸಾಕ್ಷ ಜೀವಿಗಳ); — ಆಂತರಿಕ ವೃತ್ತಿ (ಒಳ ಕ್ರಿಯೆ); — ಪ್ರಾಣ ಮೊದಲಾದವುಗಳನ್ನು ಪ್ರೇರಿಸುವ (ಪ್ರಾಣ ಮೊದಲಾದದ್ದನ್ನು ಚಲಿಸುವಂತೆ ಮಾಡುವ); — ಪರಿಗಣಿಸಲ್ಪಟ್ಟಿದೆ, ಮನ್ನಿಸಲ್ಪಟ್ಟಿದೆ; — ಜೀವನ ಎಂದು ಕರೆಯಲ್ಪಡುವ (ಜೀವಂತಿಕೆ); — ಅಥವಾ, ಇಲ್ಲವೇ; — ಪ್ರಾಣದಲ್ಲಿ; — ಅಹಂತಾ ('ಅಹಂ' ಭಾವ, ನಾನು-ತನ); — ಪುರ್ಯಷ್ಟಕಾತ್ಮಿಕ (ಸೂಕ್ಷ್ಮ ಶರೀರ ಸ್ವರೂಪವಾದ)
ಪ್ರಾಣ ಮೊದಲಾದವುಗಳನ್ನು ಪ್ರೇರಿಸುವ, ಇಂದ್ರಿಯಗಳುಳ್ಳವರ ಆಂತರಿಕ ವೃತ್ತಿಯು 'ಜೀವನ' ಎಂದು ಪರಿಗಣಿಸಲ್ಪಟ್ಟಿದೆ; ಇಲ್ಲವೇ ಪುರ್ಯಷ್ಟಕಾತ್ಮಕವಾದ (ಸೂಕ್ಷ್ಮ ಶರೀರ ಸ್ವರೂಪವಾದ) ಪ್ರಾಣದಲ್ಲಿನ ಅಹಂತೆ.