Bhagavad Gītā (Kashmirian recension)· 5.24 / 29

Bhagavad Gītā (Kashmirian recension)5.24

5.24
अन्तःसुखोऽन्तरारामस्तथाऽन्तर्ज्योतिरेव यः । स पार्थ परमं योगं ब्रह्मभूतोऽधिगच्छति ॥ ५-२४ ॥
antaḥsukho'ntarārāmastathā'ntarjyotireva yaḥ | sa pārtha paramaṃ yogaṃ brahmabhūto'dhigacchati || 5-24 ||
— ಒಳಗೆ ಸುಖವುಳ್ಳವನು, ಒಳಗೆ ರಮಿಸುವವನು ; — ಹಾಗೆಯೇ ಒಳಗೆ ಜ್ಯೋತಿಯುಳ್ಳವನು ; — ಅವನು, ಎಲೈ ಪಾರ್ಥ, ಪರಮ ಯೋಗವನ್ನು ; — ಬ್ರಹ್ಮಭೂತನಾಗಿ ಹೊಂದುತ್ತಾನೆ

ಯಾರು ಒಳಗೆ ಸುಖವುಳ್ಳವನೋ, ಒಳಗೆ ರಮಿಸುವವನೋ, ಹಾಗೆಯೇ ಒಳಗೆ ಜ್ಯೋತಿಯುಳ್ಳವನೋ, ಅವನು ಎಲೈ ಪಾರ್ಥ, ಬ್ರಹ್ಮಭೂತನಾಗಿ ಪರಮ ಯೋಗವಾದ ಬ್ರಹ್ಮನಿರ್ವಾಣವನ್ನು ಹೊಂದುತ್ತಾನೆ.